Bengaluru Rural District Court Recruitment 2026: ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ – 21 ಶೀಘ್ರಲಿಪಿಗಾರ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ!

ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖಾಲಿ ಇರುವ ಶೀಘ್ರಲಿಪಿಗಾರ ಗ್ರೇಡ್-III ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ Bengaluru court Recruitment 2026 ಅಧಿಸೂಚನೆಯಡಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೇರ ನೇಮಕಾತಿಗಾಗಿ ಇಂದೇ ಅರ್ಜಿ ಸಲ್ಲಿಸಬಹುದು.

ಈ ಉದ್ಯೋಗ ಕಾಲ್ಫಾರ್ಮ್ ಕುರಿತು ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಕೊನೆಯ ದಿನಾಂಕದವರೆಗೆ ಕಾಯದೆ ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ,

ನೇಮಕಾತಿಯ ಪ್ರಮುಖ ಮುಖ್ಯಾಂಶಗಳು:

  • ಸಂಸ್ಥೆಯ ಹೆಸರು: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ
  • ಹುದ್ದೆಯ ಹೆಸರು: ಶೀಘ್ರಲಿಪಿಗಾರ ಗ್ರೇಡ್-III (Stenographer Grade-III)
  • ಒಟ್ಟು ಹುದ್ದೆಗಳು: 21
  • ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ (Online Mode)
  • ಉದ್ಯೋಗ ಸ್ಥಳ: ಬೆಂಗಳೂರು ಗ್ರಾಮಾಂತರ (ಕರ್ನಾಟಕ)
  • ಅಧಿಕೃತ ವೆಬ್‌ಸೈಟ್: bengalururural.dcourts.gov.in

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17.08.2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.09.2026 (ರಾತ್ರಿ 11:59 ರವರೆಗೆ)
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 15.09.2026

Bengaluru Court Recruitment 2026 ಹುದ್ದೆಗಳ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಒಟ್ಟು 21 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ 04 ಹಿಂಬಾಕಿ (Backlog) ಹುದ್ದೆಗಳು ಮತ್ತು 17 ಹೊಸ ಹುದ್ದೆಗಳು ಒಳಗೊಂಡಿವೆ.

1. ಹಿಂಬಾಕಿ ಹುದ್ದೆಗಳು (Backlog Vacancies): 04

ವರ್ಗೀಕರಣಮಹಿಳೆಗ್ರಾಮೀಣಅಂಗವಿಕಲಒಟ್ಟು ಹುದ್ದೆಗಳು
ಪರಿಶಿಷ್ಟ ಜಾತಿ (SC)000101*02
ಪ್ರವರ್ಗ-1 (Cat-1)00010001
ಪ್ರವರ್ಗ-2ಎ (Cat-2A)000001*01
ಒಟ್ಟು00020204

*ಸೂಚನೆ: ಪರಿಶಿಷ್ಟ ಜಾತಿ ಮತ್ತು ಪ್ರವರ್ಗ-2ಎ ಯ ಈ ಹಿಂಬಾಕಿ ಹುದ್ದೆಗಳನ್ನು ದೃಷ್ಟಿಮಾಂದ್ಯ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

2. ಹೊಸ ಹುದ್ದೆಗಳ ವರ್ಗೀಕರಣ (New Vacancies): 17

ಪ್ರವರ್ಗಇತರೆಮಹಿಳೆಗ್ರಾಮೀಣಅಂಗವಿಕಲಒಟ್ಟು
ಪರಿಶಿಷ್ಟ ಜಾತಿ (ಪ್ರವರ್ಗ-ಎ)0100000001
ಪರಿಶಿಷ್ಟ ಜಾತಿ (ಪ್ರವರ್ಗ-ಬಿ)0100000001
ಪರಿಶಿಷ್ಟ ಜಾತಿ (ಪ್ರವರ್ಗ-ಸಿ)01*00000001
ಪರಿಶಿಷ್ಟ ಪಂಗಡ (ST)0100000001
ಪ್ರವರ್ಗ-1 (Cat-1)0100000001
ಪ್ರವರ್ಗ-2ಎ (Cat-2A)0101000002
ಪ್ರವರ್ಗ-2ಬಿ (Cat-2B)0100000001
ಪ್ರವರ್ಗ-3ಬಿ (Cat-3B)0100000001
ಸಾಮಾನ್ಯ ಅರ್ಹತೆ (General Merit)02030201**08
ಒಟ್ಟು1004020117

ವೇತನ ಶ್ರೇಣಿಯ ವಿವರ 

Bengaluru court Recruitment 2026 ಅಡಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ ಶ್ರೇಣಿ ₹44,425 – ₹83,700 ವರೆಗೆ ಇರಲಿದೆ. (ರೂ. 44425-1125-47800-1250-52800-1375-58300-1500-64300-1650-74200-1900-83700) ಮತ್ತು ಸರ್ಕಾರದ ನಿಯಮಾನುಸಾರ ಇತರೆ ಭತ್ಯೆಗಳು ಲಭ್ಯವಿರುತ್ತವೆ.

ಶೈಕ್ಷಣಿಕ ವಿದ್ಯಾರ್ಹತೆ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು:

  • ಶೈಕ್ಷಣಿಕ ವಿದ್ಯಾರ್ಹತೆ: ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 3 ವರ್ಷಗಳ ‘ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್’ ಪಾಸಾಗಿರಬೇಕು.
  • ತಾಂತ್ರಿಕ ಅರ್ಹತೆ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಹಿರಿಯ ಶ್ರೇಣಿ ಬೆರಳಚ್ಚು (Senior Typing) ಮತ್ತು ಹಿರಿಯ ಶ್ರೇಣಿ ಶೀಘ್ರಲಿಪಿ (Senior Stenography) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
  • ಕಂಪ್ಯೂಟರ್ ಜ್ಞಾನ: ಗಣಕಯಂತ್ರ (ಕಂಪ್ಯೂಟರ್) ಬಳಕೆಯ ಜ್ಞಾನ ಹೊಂದುವುದು ಅವಶ್ಯಕ.

ವಯೋಮಿತಿ ಮತ್ತು ವಯೋಸಡಿಲಿಕೆ

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.

ವಿಶೇಷ ವಯೋಮಿತಿ ಸಡಿಲಿಕೆ:
ಸರ್ಕಾರದ ಆದೇಶದಂತೆ Bengaluru court Recruitment 2026 ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 05 ವರ್ಷಗಳ ವಯೋಸಡಿಲಿಕೆ ನೀಡಲಾಗಿದೆ.

  • ಸಾಮಾನ್ಯ ವರ್ಗ: ಗರಿಷ್ಠ 40 ವರ್ಷ (35 + 05)
  • ಪ್ರವರ್ಗ 2ಎ, 2ಬಿ, 3ಎ, 3ಬಿ: ಗರಿಷ್ಠ 43 ವರ್ಷ (38 + 05)
  • ಪ.ಜಾ, ಪ.ಪಂ ಮತ್ತು ಪ್ರವರ್ಗ-1: ಗರಿಷ್ಠ 45 ವರ್ಷ (40 + 05)

ಅರ್ಜಿ ಶುಲ್ಕದ ವಿವರಗಳು

ಅಭ್ಯರ್ಥಿಗಳು ಆನ್‌ಲೈನ್ ಲಿಂಕ್ ಮೂಲಕ ‘State Bank Collect’ ಬಳಸಿ ಶುಲ್ಕ ಪಾವತಿಸಬೇಕು:

  • ಸಾಮಾನ್ಯ ಅರ್ಹತೆ (GM): ₹200/-
  • ಪ್ರವರ್ಗ 2ಎ, 2ಬಿ, 3ಎ, 3ಬಿ: ₹100/-
  • ಪ.ಜಾ, ಪ.ಪಂ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಉಚಿತ (ಶುಲ್ಕ ವಿನಾಯಿತಿ ಇದೆ)

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

Bengaluru court Recruitment 2026 ನಿಯಮಾವಳಿಗಳ ಪ್ರಕಾರ ನೇರ ನೇಮಕಾತಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

  1. ಕೌಶಲ ಪರೀಕ್ಷೆ:
    • 1 ನಿಮಿಷಕ್ಕೆ 120 ಪದಗಳ ವೇಗದಲ್ಲಿ ತಲಾ 5 ನಿಮಿಷಗಳ ಕನ್ನಡ ಮತ್ತು ಇಂಗ್ಲಿಷ್ ಉಕ್ತಲೇಖನ ನೀಡಲಾಗುವುದು.
    • ಅದನ್ನು 45 ನಿಮಿಷಗಳಲ್ಲಿ ವಿಶೇಷ ತಂತ್ರಾಂಶವಿರುವ ಕಂಪ್ಯೂಟರ್‌ನಲ್ಲಿ ಬೆರಳಚ್ಚು ಮಾಡಬೇಕು.
    • ಕನ್ನಡ ಮತ್ತು ಇಂಗ್ಲಿಷ್ ಕೌಶಲ ಪರೀಕ್ಷೆಗೆ ತಲಾ 100 ಅಂಕ ನಿಗದಿಪಡಿಸಲಾಗಿದ್ದು, ಉತ್ತೀರ್ಣರಾಗಲು ಕನಿಷ್ಠ 50 ಅಂಕ ಗಳಿಸುವುದು ಕಡ್ಡಾಯ.
  2. ಸಂದರ್ಶನ: ಕೌಶಲ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5 ಅನುಪಾತ) ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ಗರಿಷ್ಠ 5% ಅಂಕಗಳಿರುತ್ತವೆ.
  3. ಅಂತಿಮ ಆಯ್ಕೆ ಪಟ್ಟಿ: ಶೈಕ್ಷಣಿಕ ಅರ್ಹತೆ, ಕೌಶಲ ಪರೀಕ್ಷೆ ಮತ್ತು ಸಂದರ್ಶನದ ಒಟ್ಟು ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ.

ಅಪ್‌ಲೋಡ್ ಮಾಡಲು ಅಗತ್ಯವಿರುವ ಪ್ರಮಾಣಪತ್ರಗಳು

  • SSLC ಅಂಕಪಟ್ಟಿ (ಜನ್ಮ ದಿನಾಂಕದ ದೃಢೀಕರಣಕ್ಕಾಗಿ)
  • ದ್ವಿತೀಯ ಪಿಯುಸಿ / ಡಿಪ್ಲೊಮಾ ಅಂಕಪಟ್ಟಿಗಳು
  • ಕನ್ನಡ ಮತ್ತು ಇಂಗ್ಲಿಷ್ ಹಿರಿಯ ಶ್ರೇಣಿ ಟೈಪಿಂಗ್ ಹಾಗೂ ಶಾರ್ಟ್‌ಹ್ಯಾಂಡ್ ಸರ್ಟಿಫಿಕೇಟ್
  • ಇತ್ತೀಚಿನ ಬಿಳಿ ಹಿನ್ನೆಲೆಯುಳ್ಳ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ (50 KB ಗಿಂತ ಕಡಿಮೆ)
  • ಕಪ್ಪು ಬಾಲ್ ಪಾಯಿಂಟ್ ಪೆನ್ನಿನಲ್ಲಿ ಮಾಡಿದ ಸ್ಪಷ್ಟ ಸಹಿಯ ಸ್ಕ್ಯಾನ್ ಪ್ರತಿ (25 KB ಗಿಂತ ಕಡಿಮೆ)
  • ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಮೀಸಲಾತಿ ಪ್ರಮಾಣಪತ್ರಗಳು (ಗ್ರಾಮೀಣ, ಕನ್ನಡ ಮಾಧ್ಯಮ, ಅಂಗವಿಕಲ, ಇತ್ಯಾದಿ)
  • ನಡತೆ ಪ್ರಮಾಣಪತ್ರಗಳು (ವಿದ್ಯಾಸಂಸ್ಥೆ & ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದದ್ದು)

👉 15,000 ಶಿಕ್ಷಕರ ನೇಮಕಾತಿ 2026 – ಅರ್ಹತೆ, ಅರ್ಜಿ ದಿನಾಂಕ ಮತ್ತು ಸಂಪೂರ್ಣ ಮಾಹಿತಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  1. ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ‘Online Recruitment’ ವಿಭಾಗವನ್ನು ಆಯ್ಕೆ ಮಾಡಿ ಶೀಘ್ರಲಿಪಿಗಾರ ಹುದ್ದೆಯ ಲಿಂಕ್ ಕ್ಲಿಕ್ ಮಾಡಿ.
  3. Bengaluru court Recruitment 2026 ಅರ್ಜಿಯಲ್ಲಿ ಕೇಳಲಾದ ವಿವರಗಳನ್ನು ಸರಿಯಾಗಿ ನಮೂದಿಸಿ.
  4. ನಿಮ್ಮ ಫೋಟೋ ಮತ್ತು ಸಹಿಯ ಸ್ಕ್ಯಾನ್ ಪ್ರತಿಯನ್ನು ನಿಗದಿತ ಅಳತೆಯಲ್ಲಿ ಅಪ್‌ಲೋಡ್ ಮಾಡಿ.
  5. ನೀಡಿದ ಮಾಹಿತಿ ಪರಿಶೀಲಿಸಿ ಅರ್ಜಿಯನ್ನು Submit ಮಾಡಿ.
  6. ‘SBI Collect’ ಮೂಲಕ ಅರ್ಜಿ ಶುಲ್ಕ ಪಾವತಿಸಿ e-receipt ಡೌನ್‌ಲೋಡ್ ಮಾಡಿಕೊಳ್ಳಿ.
  7. ಸಲ್ಲಿಸಿದ ಅರ್ಜಿ ಮತ್ತು ರಶೀದಿಯ ಪ್ರಿಂಟ್‌ಔಟ್ ತೆಗೆದುಕೊಂಡು ಸುರಕ್ಷಿತವಾಗಿಟ್ಟುಕೊಳ್ಳಿ.

ಪ್ರಮುಖ ಲಿಂಕ್‌ಗಳು

ಆನ್‌ಲೈನ್ ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ PDFಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್bengalururural.dcourts.gov.in

 

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQs)

Q1: Bengaluru court Recruitment 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಉತ್ತರ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 15.09.2026 ಕೊನೆಯ ದಿನಾಂಕವಾಗಿದೆ.

Q2: ಈ ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ: ಒಟ್ಟು 21 ಶೀಘ್ರಲಿಪಿಗಾರ (Stenographer Grade-III) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

Q3: ಅರ್ಜಿ ಸಲ್ಲಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆ ಏನು?
ಉತ್ತರ: 2ನೇ ಪಿಯುಸಿ ಅಥವಾ ಡಿಪ್ಲೊಮಾ ಜೊತೆಗೆ ಕನ್ನಡ ಹಾಗೂ ಇಂಗ್ಲಿಷ್ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

Q4: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಎಷ್ಟು?
ಉತ್ತರ: ವಿಶೇಷ 5 ವರ್ಷಗಳ ಸಡಿಲಿಕೆ ಸೇರಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷಗಳು.

Q5: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಎಷ್ಟಿರುತ್ತದೆ?
ಉತ್ತರ: SC/ST, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ (ಉಚಿತ).

Q6: ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಉತ್ತರ: ಕೌಶಲ ಪರೀಕ್ಷೆ (ಟೈಪಿಂಗ್ ಮತ್ತು ಶಾರ್ಟ್‌ಹ್ಯಾಂಡ್) ಮತ್ತು ಸಂದರ್ಶನದ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುತ್ತದೆ.

Q7: ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ವೇತನ ಎಷ್ಟಿರುತ್ತದೆ?
ಉತ್ತರ: ಮಾಸಿಕ ವೇತನ ಶ್ರೇಣಿ ₹44,425 ರಿಂದ ₹83,700 ವರೆಗೆ ಇರಲಿದೆ.

Q8: ಅರ್ಜಿ ಶುಲ್ಕವನ್ನು ಆಫ್‌ಲೈನ್‌ನಲ್ಲಿ ಪಾವತಿಸಬಹುದೇ?
ಉತ್ತರ: ಇಲ್ಲ, ಶುಲ್ಕವನ್ನು ‘State Bank Collect’ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬೇಕು.

 

ಲೇಖಕರ ಬಗ್ಗೆ

ಸೌಮ್ಯ KH

ಸೌಮ್ಯ KH ಅವರು ಸರ್ಕಾರಿ ಉದ್ಯೋಗ ಮಾಹಿತಿ, ನೇಮಕಾತಿ ಅಧಿಸೂಚನೆಗಳು ಮತ್ತು ಶೈಕ್ಷಣಿಕ ಸುದ್ದಿಗಳನ್ನು ನಿಖರವಾಗಿ ಸಂಗ್ರಹಿಸಿ ಓದುಗರಿಗೆ ಸರಳ ಕನ್ನಡದಲ್ಲಿ ತಲುಪಿಸುವ ಲೇಖಕರು. ಉದ್ಯೋಗಾಕಾಂಕ್ಷಿಗಳಿಗೆ ಉಪಯುಕ್ತವಾಗುವ ಸಂಪೂರ್ಣ ಮತ್ತು ಅಧಿಕೃತ ಮಾಹಿತಿಯನ್ನು ಒದಗಿಸುವುದು ಇವರ ಮುಖ್ಯ ಗುರಿಯಾಗಿದೆ.