KEA Land Surveyor Recruitment 2026: 750 ಹುದ್ದೆಗಳು, Hall Ticket ಬಿಡುಗಡೆ – ಪರೀಕ್ಷಾ ದಿನಾಂಕ & Download Link

Table of Contents

🔴 ಪ್ರಮುಖ ಅಪ್‌ಡೇಟ್:

🔔 KEA Land Surveyor Hall Ticket 2026 ಬಿಡುಗಡೆ

KEA Land Surveyor Recruitment 2026 ಗೆ ಸಂಬಂಧಿಸಿದಂತೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಭೂಮಾಪಕ (Land Surveyor/Bhoomapaka) ಹುದ್ದೆಗಳ ಪರೀಕ್ಷೆಗೆ ಹಾಲ್ ಟಿಕೆಟ್ ಬಿಡುಗಡೆ ಮಾಡಿದೆ.

750 Land Surveyor ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇದೀಗ ತಮ್ಮ Hall Ticket ಅನ್ನು ಅಧಿಕೃತ KEA ಪೋರ್ಟಲ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

RPC / ಉಳಿಕೆ ಮೂಲ ವೃಂದದ ಪರೀಕ್ಷೆ: 02 ಅಕ್ಟೋಬರ್ 2026

Paper 1: ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ

Paper 2: ಮಧ್ಯಾಹ್ನ 2:30 ರಿಂದ ಸಂಜೆ 4:30 ರವರೆಗೆ

ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿದ ನಂತರ ಪರೀಕ್ಷಾ ಕೇಂದ್ರ, ಸಮಯ ಮತ್ತು ಇತರೆ ಸೂಚನೆಗಳನ್ನು ತಪ್ಪದೇ ಪರಿಶೀಲಿಸಿಕೊಳ್ಳಿ.


👉 Land Surveyor Hall Ticket Download

 

ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯ

KEA Land Surveyor Recruitment 2026ಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 20 ಆಗಸ್ಟ್ 2026ರವರೆಗೆ ವಿಸ್ತರಿಸಲಾಗಿತ್ತು. ಅರ್ಜಿ ಶುಲ್ಕ ಪಾವತಿಸಲು 21 ಆಗಸ್ಟ್ 2026 ಕೊನೆಯ ದಿನವಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಪ್ರಸ್ತುತ ಹೊಸದಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಅಧಿಕೃತ ಪ್ರಕಟಣೆಗಳನ್ನು ಗಮನಿಸಬೇಕು.

ಕೊನೆಯ ಅಪ್‌ಡೇಟ್: 21 ಸೆಪ್ಟೆಂಬರ್ 2026 

 “ಅರ್ಜಿ ಮುಕ್ತಾಯ — ಪರೀಕ್ಷೆ ಮುಂದಿನ ಹಂತ”

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮುಖಾಂತರ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 750 ಭೂಮಾಪಕರ (KEA Land Surveyor Recruitment 2026) ರ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಇಲಾಖೆಯು ಇದೀಗ ಬಿಗ್ ಅಪ್‌ಡೇಟ್ ನೀಡಿದೆ. ಸರ್ಕಾರವು ಇತ್ತೀಚೆಗೆ ಹೊರಡಿಸಿದ ತಿದ್ದೋಲೆ ಅನ್ವಯ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಪರಿಷ್ಕರಿಸಲಾಗಿದ್ದು, ಮತ್ತಷ್ಟು ಬಿ.ಎಸ್.ಸಿ (B.Sc) ಪದವೀಧರರಿಗೆ ಅರ್ಜಿ ಸಲ್ಲಿಸಲು ಭರ್ಜರಿ ಅವಕಾಶ ಕಲ್ಪಿಸಲಾಗಿದೆ.

ಹೌದು, ಈ ಹಿಂದೆ ನಿಗದಿಪಡಿಸಲಾಗಿದ್ದ ಇಂಜಿನಿಯರಿಂಗ್ ಪದವಿ, ಡಿಪ್ಲೋಮಾ ಹಾಗೂ ಸಾಮಾನ್ಯ B.Sc ವಿಷಯಗಳ ಜೊತೆಗೆ ಇದೀಗ ತೋಟಗಾರಿಕೆ (Horticulture), ಅರಣ್ಯ (Forestry), ಮೀನುಗಾರಿಕೆ (Fisheries) ಮತ್ತು ರೇಷ್ಮೆ (Sericulture) ವಿಷಯಗಳಲ್ಲಿ ಬಿ.ಎಸ್.ಸಿ ಮುಗಿಸಿದ ಅಭ್ಯರ್ಥಿಗಳಿಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದರೊಂದಿಗೆ, ಹೆಚ್ಚಿನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು 20 ಆಗಸ್ಟ್ 2026 ರವರೆಗೆ ವಿಸ್ತರಿಸಲಾಗಿದೆ.

ಈ ನೂತನ ತಿದ್ದುಪಡಿ ವಿವರಗಳು, ಶೈಕ್ಷಣಿಕ ಅರ್ಹತೆಯ ಸಂಪೂರ್ಣ ಮಾಹಿತಿ ಮತ್ತು ಅಪ್‌ಡೇಟ್ ಆದ ಹೊಸ ವೇಳಾಪಟ್ಟಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರವಾಗಿ ನೀಡಲಾಗಿದೆ.

KEA Land Surveyor Exam Date 2026

KEA Land Surveyor 2026 ಪರೀಕ್ಷೆಯನ್ನು ಎರಡು papersಗಳಲ್ಲಿ ನಡೆಸಲಾಗುತ್ತದೆ. RPC / ಉಳಿಕೆ ಮೂಲ ವೃಂದದ ಪರೀಕ್ಷೆಯು 02 ಅಕ್ಟೋಬರ್ 2026ರಂದು ನಡೆಯಲಿದೆ.

ದಿನಾಂಕಪೇಪರ್ಸಮಯ
02-10-2026Paper 1 – General Knowledge10:30 AM – 12:30 PM
02-10-2026Paper 2 – Specific Paper2:30 PM – 4:30 PM

KEA Land Surveyor Recruitment 2026 ಪ್ರಮುಖ ಮಾಹಿತಿ

ಭೂಮಾಪನ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಮುಖ್ಯ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ಇಲಾಖೆಯ ಹೆಸರುಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ನೇಮಕಾತಿ ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಹುದ್ದೆಯ ಹೆಸರುಭೂಮಾಪಕರು (ಸರ್ವೇಯರ್) – ಗ್ರೂಪ್ ಸಿ
ಒಟ್ಟು ಹುದ್ದೆಗಳು750 ಹುದ್ದೆಗಳು (ಕಲ್ಯಾಣ ಕರ್ನಾಟಕ: 190 + ಉಳಿಕೆ ಮೂಲ ವೃಂದ: 560)
ವೇತನ ಶ್ರೇಣಿರೂ. 37,500 – 76,100 (ಪ್ರತಿ ತಿಂಗಳು)
ಅರ್ಜಿ ಸಲ್ಲಿಸುವ ವಿಧಾನಆನ್‌ಲೈನ್ ಮೂಲಕ

 

ಪ್ರಮುಖ ದಿನಾಂಕಗಳು (Important Extended Dates)

ವಿವರದಿನಾಂಕ / ಸ್ಥಿತಿ
ಅರ್ಜಿ ಆರಂಭ11-07-2026
ಮೂಲ ಕೊನೆಯ ದಿನಾಂಕ05-08-2026
ವಿಸ್ತರಿಸಿದ ಕೊನೆಯ ದಿನಾಂಕ20-08-2026 — ಮುಕ್ತಾಯ
ಶುಲ್ಕ ಪಾವತಿ ಕೊನೆಯ ದಿನಾಂಕ21-08-2026 — ಮುಕ್ತಾಯ
ಪ್ರಸ್ತುತ ಸ್ಥಿತಿ🔴 ಅರ್ಜಿ ಸಲ್ಲಿಕೆ ಮುಕ್ತಾಯ

 

KEA Land Surveyor Hall Ticket 2026 ಡೌನ್‌ಲೋಡ್ ಮಾಡುವುದು ಹೇಗೆ?

Land Surveyor Hall Ticket ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಬಹುದು.

  1. ಮೊದಲು KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. Latest News / Recruitment ವಿಭಾಗಕ್ಕೆ ಹೋಗಿ.
  3. Land Surveyor Hall Ticket 2026 Download ಲಿಂಕ್ ಆಯ್ಕೆ ಮಾಡಿ.
  4. ನಿಮ್ಮ Application Number ನಮೂದಿಸಿ.
  5. Date of Birth ನಮೂದಿಸಿ.
  6. ಅಗತ್ಯವಿರುವ Security Pin / Login ವಿವರಗಳನ್ನು ನಮೂದಿಸಿ.
  7. Submit ಮೇಲೆ ಕ್ಲಿಕ್ ಮಾಡಿ.
  8. Hall Ticket ಕಾಣಿಸಿಕೊಂಡ ನಂತರ Download ಮಾಡಿಕೊಂಡು Printout ತೆಗೆದುಕೊಳ್ಳಿ.

ಗಮನಿಸಿ: Hall Ticketನಲ್ಲಿ ನಿಮ್ಮ ಹೆಸರು, ಫೋಟೋ, ಪರೀಕ್ಷಾ ದಿನಾಂಕ, ಸಮಯ ಮತ್ತು ಪರೀಕ್ಷಾ ಕೇಂದ್ರದ ವಿವರಗಳನ್ನು ಪರಿಶೀಲಿಸಿಕೊಳ್ಳಿ.

ಶೈಕ್ಷಣಿಕ ಅರ್ಹತೆಯ ಸಂಪೂರ್ಣ ವಿವರಗಳು (Updated Qualification Details)

ಸರ್ಕಾರದ ನೂತನ ತಿದ್ದೋಲೆಯ ಪ್ರಕಾರ, ಭೂಮಾಪಕರ (Land Surveyor) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಯಾವುದಾದರೂ ಒಂದು ಶೈಕ್ಷಣಿಕ ಅರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಹೊಂದಿರಬೇಕು:

  • ಇಂಜಿನಿಯರಿಂಗ್ / ತಂತ್ರಜ್ಞಾನ ಪದವಿ: ಕಾನೂನಿನಡಿಯಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ (Engineering) ಅಥವಾ ತಂತ್ರಜ್ಞಾನದಲ್ಲಿ (Technology) ಯಾವುದೇ ಪದವಿ ಹೊಂದಿರಬೇಕು ಅಥವಾ ಎ.ಎಂ.ಐ.ಇ. (AMIE) ಪದವಿ ಹೊಂದಿರಬೇಕು.
  • ಡಿಪ್ಲೋಮಾ (Diploma): AICTE ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಇಂಜಿನಿಯರಿಂಗ್ / ತಂತ್ರಜ್ಞಾನದ ಯಾವುದೇ ವಿಭಾಗದಲ್ಲಿ 3 ವರ್ಷದ ಡಿಪ್ಲೋಮಾ ಮುಗಿಸಿರಬೇಕು.
  • ಬಿ.ಎಸ್.ಸಿ (B.Sc) ಪದವೀಧರರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಳಗಿನ ವಿಷಯಗಳಲ್ಲಿ B.Sc ಪದವಿ ಪಡೆದಿರಬೇಕು:
    • ಗಣಿತ (Mathematics)
    • ಭೌತಶಾಸ್ತ್ರ (Physics)
    • ಕಂಪ್ಯೂಟರ್ ಸೈನ್ಸ್ (Computer Science)
    • ಮಾಹಿತಿ ತಂತ್ರಜ್ಞಾನ (Information Technology)
    • ಇನ್ಸ್ಟ್ರುಮೆಂಟೇಶನ್ (Instrumentation)
    • ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ (Electronics & Communication)
    • ಕೃಷಿ (Agriculture)
    • ತೋಟಗಾರಿಕೆ (Horticulture) (ಹೊಸದಾಗಿ ಸೇರ್ಪಡೆ)
    • ಅರಣ್ಯ (Forestry) (ಹೊಸದಾಗಿ ಸೇರ್ಪಡೆ)
    • ಮೀನುಗಾರಿಕೆ (Fisheries) (ಹೊಸದಾಗಿ ಸೇರ್ಪಡೆ)
    • ರೇಷ್ಮೆ (Sericulture) (ಹೊಸದಾಗಿ ಸೇರ್ಪಡೆ)

ವಿಶೇಷ ಸೂಚನೆ: ಬಿ.ಎಸ್.ಸಿ (B.Sc) ಯಲ್ಲಿ ಗಣಿತ ಅಥವಾ ಭೌತಶಾಸ್ತ್ರ ವಿಷಯವನ್ನು ಕನಿಷ್ಠ ಒಂದು ವಿಷಯವಾಗಿ ಪಡೆದು ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಹಾಗೂ B.Sc (Honors) ಪದವಿ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಸಂಪೂರ್ಣ ಅರ್ಹರಾಗಿರುತ್ತಾರೆ.

ವಯೋಮಿತಿ ಮತ್ತು ಸಡಿಲಿಕೆ ಮಾಹಿತಿ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಸಾಮಾನ್ಯ ಅರ್ಹತೆ: ಗರಿಷ್ಠ 40 ವರ್ಷಗಳು
  • ಹಿಂದುಳಿದ ಪ್ರವರ್ಗಗಳಿಗೆ (2A, 2B, 3A, 3B): ಗರಿಷ್ಠ 43 ವರ್ಷಗಳು
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು
  • ವಿಶೇಷ ಚೇತನ ಹಾಗೂ ವಿಧವೆ ಅಭ್ಯರ್ಥಿಗಳಿಗೆ: ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ವರೆಗೆ ನಿಯಮಾನುಸಾರ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕದ ವಿವರಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಅನುಗುಣವಾಗಿ ಕೆಳಗಿನ ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕವೇ ಪಾವತಿಸಬೇಕಾಗುತ್ತದೆ:

  • ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳು (GM, 2A, 2B, 3A, 3B): ರೂ. 750/-
  • SC, ST, ಪ್ರವರ್ಗ-1, ತೃತೀಯಲಿಂಗಿ ಮತ್ತು ಮಾಜಿ ಸೈನಿಕರು: ರೂ. 500/-
  • ವಿಶೇಷ ಚೇತನ ಅಭ್ಯರ್ಥಿಗಳಿಗೆ: ರೂ. 250/-

ಭೂಮಾಪಕರ ಹುದ್ದೆಗಳ ವೇತನ ಶ್ರೇಣಿ

ಕರ್ನಾಟಕ ಸರ್ಕಾರದ ನಿಯಮಾವಳಿಗಳ ಪ್ರಕಾರ ಆಯ್ಕೆಯಾಗುವ ಭೂಮಾಪಕ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಮಾಸಿಕ ಸಂಬಳದೊಂದಿಗೆ ಇಲಾಖೆಯ ನಿಯಮಾನುಸಾರ ಮನೆ ಬಾಡಿಗೆ ಭತ್ಯೆ (HRA) ಮತ್ತು ತುಟ್ಟಿಭತ್ಯೆ (DA) ಸೌಲಭ್ಯಗಳು ಲಭ್ಯವಿರುತ್ತವೆ.

ಹುದ್ದೆಯ ಹೆಸರುವೇತನ ಶ್ರೇಣಿಯ ವಿವರ (ಮಾಸಿಕ ಸಂಬಳ)
ಭೂಮಾಪಕರು (Land Surveyor)ರೂಪಾಯಿ 37,500 ರಿಂದ ರೂಪಾಯಿ 76,100ವರೆಗೆ

ಆಯ್ಕೆ ವಿಧಾನ ಮತ್ತು ಪರೀಕ್ಷಾ ಹಂತಗಳು

ಈ ನೇಮಕಾತಿಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದ ಮೇಲೆಯೇ ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವೈಯಕ್ತಿಕ ಸಂದರ್ಶನ ಇರುವುದಿಲ್ಲ. ಆಯ್ಕೆ ವಿಧಾನದ ಪ್ರಮುಖ ಹಂತಗಳು ಈ ಕೆಳಗಿನಂತಿವೆ:

ಮೊದಲ ಹಂತವಾಗಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಎರಡು ಕಡ್ಡಾಯ ಪತ್ರಿಕೆಗಳಿರುತ್ತವೆ. ಎರಡನೇ ಹಂತವಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ, ಇದರಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ತದನಂತರ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆಯ (Merit List) ಆಧಾರದ ಮೇಲೆ ಮತ್ತು ಮೂಲ ದಾಖಲೆಗಳ ಪರಿಶೀಲನೆ (Document Verification) ನಡೆಸಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಪರೀಕ್ಷಾ ಕ್ರಮ ಮತ್ತು ಅಂಕಗಳ ವಿವರ

ಲಿಖಿತ ಪರೀಕ್ಷೆಯು ವಸ್ತುನಿಷ್ಠ ಬಹು ಆಯ್ಕೆ (MCQ) ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೂ 0.25 ಅಂಕಗಳ ನೆಗೆಟಿವ್ ಮಾರ್ಕಿಂಗ್ ಇರಲಿದೆ. ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಗಳಿಸುವುದು ಅತ್ಯಗತ್ಯವಾಗಿದೆ.

ಪರೀಕ್ಷಾ ವಿವರಒಟ್ಟು ಅಂಕಗಳುಸಮಯದ ಅವಧಿ
ಪತ್ರಿಕೆ 1: ಸಾಮಾನ್ಯ ಜ್ಞಾನ (General Knowledge)100 ಅಂಕಗಳು2 ಗಂಟೆಗಳು
ಪತ್ರಿಕೆ 2: ನಿರ್ದಿಷ್ಟ ವಿಷಯಗಳು (Specific Paper)100 ಅಂಕಗಳು2 ಗಂಟೆಗಳು
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ150 ಅಂಕಗಳು2 ಗಂಟೆಗಳು

 

 ಅಧಿಕೃತ ಪರೀಕ್ಷಾ ದಿನಾಂಕ ಮತ್ತು ಸಮಯದ ವಿವರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭೂಮಾಪಕರ ನೇಮಕಾತಿಗಾಗಿ ನಡೆಸುವ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ. ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದಕ್ಕೆ ಪ್ರತ್ಯೇಕ ದಿನಾಂಕಗಳಂದು ಪರೀಕ್ಷೆಯನ್ನು ಆಯೋಜಿಸಲಾಗಿದೆ:

ವೃಂದದ ವಿವರ (Cadre)ಪರೀಕ್ಷಾ ದಿನಾಂಕಸಮಯಪತ್ರಿಕೆಯ ವಿವರ
ಉಳಿಕೆ ಮೂಲ ವೃಂದ (Non-HK / RPC – 560 ಹುದ್ದೆಗಳು)ಶನಿವಾರ, 03 ಅಕ್ಟೋಬರ್ 2026ಮಧ್ಯಾಹ್ನ 3.00 ರಿಂದ ಸಂಜೆ 5.00 ರವರೆಗೆಪತ್ರಿಕೆ – 2: ನಿರ್ದಿಷ್ಟ ಪತ್ರಿಕೆ (ತಾಂತ್ರಿಕ ವಿಷಯಗಳು)
ಭಾನುವಾರ, 04 ಅಕ್ಟೋಬರ್ 2026ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆಪತ್ರಿಕೆ – 1: ಸಾಮಾನ್ಯ ಜ್ಞಾನ (GK)
ಕಲ್ಯಾಣ ಕರ್ನಾಟಕ ವೃಂದ (HK – 190 ಹುದ್ದೆಗಳು)ಶನಿವಾರ, 24 ಅಕ್ಟೋಬರ್ 2026ಮಧ್ಯಾಹ್ನ 3.00 ರಿಂದ ಸಂಜೆ 5.00 ರವರೆಗೆಪತ್ರಿಕೆ – 2: ನಿರ್ದಿಷ್ಟ ಪತ್ರಿಕೆ (ತಾಂತ್ರಿಕ ವಿಷಯಗಳು)
ಭಾನುವಾರ, 25 ಅಕ್ಟೋಬರ್ 2026ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆಪತ್ರಿಕೆ – 1: ಸಾಮಾನ್ಯ ಜ್ಞಾನ (GK)

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: ಅರ್ಹ ಅಭ್ಯರ್ಥಿಗಳಿಗೆ ನಡೆಸಲಾಗುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ನಿಖರ ದಿನಾಂಕ ಮತ್ತು ಸಮಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮುಂದಿನ ದಿನಗಳಲ್ಲಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಿದೆ.

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ

ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಒಟ್ಟು ಎರಡು ಪತ್ರಿಕೆಗಳು ಇರಲಿವೆ:

ಪತ್ರಿಕೆ 1:ಸಾಮಾನ್ಯ ಜ್ಞಾನ (ಸಾಮಾನ್ಯ ಪತ್ರಿಕೆ)

  • ಒಟ್ಟು ಅಂಕಗಳು: 100 ಅಂಕಗಳು
  • ಪರೀಕ್ಷಾ ಅವಧಿ: 2 ಗಂಟೆಗಳು
  • ವಿಷಯಗಳು: ಪ್ರಚಲಿತ ವಿದ್ಯಮಾನಗಳು, ಭಾರತೀಯ ಸಂವಿಧಾನ, ಇತಿಹಾಸ, ಭೂಗೋಳಶಾಸ್ತ್ರ, ಆಡಳಿತ ವ್ಯವಸ್ಥೆ ಮತ್ತು ಕರ್ನಾಟಕದ ಪ್ರಾದೇಶಿಕ ಆರ್ಥಿಕ ಪರಿಸ್ಥಿತಿ.

ಪತ್ರಿಕೆ 2: ನಿರ್ದಿಷ್ಟ ಪತ್ರಿಕೆ (ತಾಂತ್ರಿಕ ಪತ್ರಿಕೆ)

  • ಒಟ್ಟು ಅಂಕಗಳು: 100 ಅಂಕಗಳು
  • ಪರೀಕ್ಷಾ ಅವಧಿ: 2 ಗಂಟೆಗಳು
  • ವಿಷಯಗಳು: ಗಣಿತ (40%), ಭೌತಶಾಸ್ತ್ರ (10%), ಭೂಗೋಳಶಾಸ್ತ್ರ (10%), ಆಧುನಿಕ ಸಮೀಕ್ಷಾ ವಿಧಾನಗಳು (20%), ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ಗಳು (20%).

ಋಣಾತ್ಮಕ ಮೌಲ್ಯಮಾಪನ: ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಆದ್ದರಿಂದ ಸರಿಯಾದ ಉತ್ತರಗಳನ್ನು ಮಾತ್ರ ಗುರುತಿಸುವುದು ಉತ್ತಮ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ಎಲ್ಲಾ ಪ್ರಮುಖ ದಾಖಲೆಗಳನ್ನು ನಿಗದಿತ ಸೈಜ್‌ನಲ್ಲಿ ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳುವುದು ಕಡ್ಡಾಯವಾಗಿದೆ:

  • ಭಾವಚಿತ್ರ (Passport Size Photograph): ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (JPEG ಫಾರ್ಮ್ಯಾಟ್‌ನಲ್ಲಿ 50KB ಇಂದ 200KB ಒಳಗಿರಬೇಕು).
  • ಅಭ್ಯರ್ಥಿಯ ಸಹಿ (Signature): ಬಿಳಿ ಕಾಗದದ ಮೇಲೆ ಕಪ್ಪು ಶಾಯಿಯ ಪೆನ್ನಿನಿಂದ ಮಾಡಿದ ಸಹಿ (JPEG ಫಾರ್ಮ್ಯಾಟ್‌ನಲ್ಲಿ 50KB ಇಂದ 70KB ಒಳಗಿರಬೇಕು).
  • ಆಧಾರ್ ಕಾರ್ಡ್ (Aadhaar Card): ಗುರುತಿನ ಚೀಟಿ ಹಾಗೂ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಅದರ ಪ್ರತಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
  • ಶೈಕ್ಷಣಿಕ ಅಂಕಪಟ್ಟಿಗಳು (Marks Cards): ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಸಿವಿಲ್ ಇಂಜಿನಿಯರಿಂಗ್, ಡಿಪ್ಲೊಮಾ ಅಥವಾ ವಿಜ್ಞಾನ ಪದವಿಯ (B.Sc) ಎಲ್ಲಾ ವರ್ಷಗಳ ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣಪತ್ರಗಳು ಇರಬೇಕು.
  • ವಯಸ್ಸಿನ ದೃಢೀಕರಣ ಪತ್ರ: ಜನ್ಮ ದಿನಾಂಕವನ್ನು ದೃಢೀಕರಿಸಲು ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪತ್ರ (TC).
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (Caste & Income Certificate): ಮೀಸಲಾತಿ ಹಾಗೂ ಶುಲ್ಕ ವಿನಾಯಿತಿ ಪಡೆಯಲು ಬಯಸುವ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ (ತಹಶೀಲ್ದಾರರಿಂದ) ಪಡೆದ ನಮೂನೆ ಡಿ, ಇ ಅಥವಾ ಎಫ್ ನಲ್ಲಿರುವ ಚಾಲ್ತಿಯಲ್ಲಿರುವ ಪ್ರಮಾಣಪತ್ರ ಹೊಂದಿರಬೇಕು.
  • ಕನ್ನಡ ಮಾಧ್ಯಮ ಪ್ರಮಾಣಪತ್ರ (Kannada Medium Certificate): 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಮೀಸಲಾತಿಗಾಗಿ ಈ ಪ್ರಮಾಣಪತ್ರವನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (Rural Candidate Certificate): ಗ್ರಾಮೀಣ ಮೀಸಲಾತಿಯಡಿ ಅರ್ಜಿ ಸಲ್ಲಿಸುವವರು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ (BEO) ಸಹಿ ಪಡೆದ ಪ್ರಮಾಣಪತ್ರವನ್ನು ಹೊಂದಿರಬೇಕು.
  • ವಿಶೇಷ ಮೀಸಲಾತಿ ಪ್ರಮಾಣಪತ್ರಗಳು (Special Reservation Certificates): ಅನ್ವಯಿಸುವಂತೆ ವಿಶೇಷ ಚೇತನ (PH) ಪ್ರಮಾಣಪತ್ರ, ಮಾಜಿ ಸೈನಿಕ ಪ್ರಮಾಣಪತ್ರ, ಯೋಜನೆಗಳಿಂದ ಸಂತ್ರಸ್ತರಾದ ಪ್ರಮಾಣಪತ್ರ ಅಥವಾ ತೃತೀಯಲಿಂಗಿ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

ಖಾಯಂ ಪೂರ್ವ ಅವಧಿ ಮತ್ತು ತರಬೇತಿ

ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಕಾಲ ಪ್ರೊಬೇಷನರಿ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಇಲಾಖೆಯ ಭೂಮಾಪನಾ ತರಬೇತಿ ಸಂಸ್ಥೆಯಲ್ಲಿ ಆರು ತಿಂಗಳ ವೃತ್ತಿ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು. ತರಬೇತಿಯ ಕೊನೆಯಲ್ಲಿ ನಡೆಸುವ ಪರೀಕ್ಷೆಯಲ್ಲಿ ನಿಗದಿತ ಅಂಕಗಳೊಂದಿಗೆ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ.

ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು KEA KSRP ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ 2026 ಲೇಖನವನ್ನು ಓದಬಹುದು.

VAO ಹುದ್ದೆಗಳ ಅರ್ಹತೆ, ವಯೋಮಿತಿ ಹಾಗೂ ಅರ್ಜಿ ಪ್ರಕ್ರಿಯೆ ತಿಳಿಯಲು KEA VAO ನೇಮಕಾತಿ 2026 ಲೇಖನ ಓದಿ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಂತ-ಹಂತದ ವಿಧಾನ

⚠️ ಸೂಚನೆ: ಈ ನೇಮಕಾತಿಯ ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದೆ. ಕೆಳಗೆ ನೀಡಿರುವ ಅರ್ಜಿ ಸಲ್ಲಿಕೆ ವಿಧಾನವನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಉಲ್ಲೇಖಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಯಾವುದೇ ತಪ್ಪುಗಳಿಲ್ಲದೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

  1. ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
    ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಆದ cetonline.karnataka.gov.in/kea ಗೆ ಭೇಟಿ ನೀಡಿ.
  2. ಹಂತ 2: ನೇಮಕಾತಿ ಲಿಂಕ್ ಆಯ್ಕೆ ಮಾಡಿ
    ವೆಬ್‌ಸೈಟ್‌ನ ಮುಖ್ಯ ಪುಟದಲ್ಲಿ ಕಾಣಿಸುವ “ಭೂಮಾಪಕರ ನೇಮಕಾತಿ-2026” (KEA Land Surveyor Recruitment 2026) ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ಹಂತ 3: ಹೊಸ ನೋಂದಣಿ (New Registration) ಮಾಡಿಕೊಳ್ಳಿ
    ಮೊದಲ ಬಾರಿಗೆ ಭೇಟಿ ನೀಡುತ್ತಿದ್ದರೆ, ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನಮೂದಿಸಿ ಹೊಸದಾಗಿ ನೋಂದಣಿ ಮಾಡಿಕೊಳ್ಳಿ. ನೋಂದಣಿ ಯಶಸ್ವಿಯಾದ ನಂತರ ನಿಮ್ಮ ಮೊಬೈಲ್‌ಗೆ ಯೂಸರ್ ಐಡಿ (User ID) ಮತ್ತು ಪಾಸ್‌ವರ್ಡ್ ಬರುತ್ತದೆ.
  4. ಹಂತ 4: ಲಾಗಿನ್ ಆಗಿ ಮಾಹಿತಿ ಭರ್ತಿ ಮಾಡಿ
    ನಿಮಗೆ ಬಂದಿರುವ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ. ನಂತರ ಅರ್ಜಿಯಲ್ಲಿ ಕೇಳಲಾದ ನಿಮ್ಮ ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ಶೈಕ್ಷಣಿಕ ಅರ್ಹತೆ ಮತ್ತು ವಿಳಾಸದಂತಹ ಎಲ್ಲಾ ವೈಯಕ್ತಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
  5. ಹಂತ 5: ಮೀಸಲಾತಿ ವಿವರಗಳನ್ನು ನಮೂದಿಸಿ
    ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣಪತ್ರದ ವಿವರಗಳು ಹಾಗೂ ಕನ್ನಡ ಮಾಧ್ಯಮ, ಗ್ರಾಮೀಣ ಅಥವಾ ಇತರ ವಿಶೇಷ ಮೀಸಲಾತಿಗಳಿದ್ದರೆ ಅವುಗಳ ನಿಖರ ಮಾಹಿತಿ ಮತ್ತು ಆರ್.ಡಿ (RD) ಸಂಖ್ಯೆಯನ್ನು ಭರ್ತಿ ಮಾಡಿ.
  6. ಹಂತ 6: ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ
    ನಿಗದಿತ ಗಾತ್ರದಲ್ಲಿ (Size) ಇರುವ ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  7. ಹಂತ 7: ಅರ್ಜಿ ಶುಲ್ಕ ಪಾವತಿಸಿ
    ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಪ್ರಿವ್ಯೂ (Preview) ನೋಡಿ ಮಾಹಿತಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ತದನಂತರ ಆನ್‌ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ನಿಮ್ಮ ವರ್ಗಕ್ಕೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ.
  8. ಹಂತ 8: ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ ಪ್ರಿಂಟ್ ತೆಗೆದುಕೊಳ್ಳಿ
    ಶುಲ್ಕ ಪಾವತಿ ಯಶಸ್ವಿಯಾದ ನಂತರ ಅರ್ಜಿಯನ್ನು ಅಂತಿಮವಾಗಿ ಸಬ್‌ಮಿಟ್ ಮಾಡಿ. ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯ ಪ್ರಿಂಟೌಟ್ ಪ್ರತಿಯನ್ನು ಮತ್ತು ಶುಲ್ಕ ಪಾವತಿಸಿದ ರಸೀದಿಯನ್ನು ಮುಂದಿನ ದಾಖಲಾತಿ ಪರಿಶೀಲನೆಗಾಗಿ ಪ್ರಿಂಟ್ ತೆಗೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ.

 ಪ್ರಮುಖ ಲಿಂಕ್‌ಗಳು

ವಿವರಲಿಂಕ್‌ಗಳ ವಿವರ
ಆನ್‌ಲೈನ್ ಅರ್ಜಿ ಸಲ್ಲಿಸುವ ನೇರ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ PDF(RPC)ಡೌನ್‌ಲೋಡ್ ಮಾಡಿ
ಅಧಿಕೃತ ಅಧಿಸೂಚನೆ PDF(KK)ಡೌನ್‌ಲೋಡ್ ಮಾಡಿ
ವಿದ್ಯಾರ್ಹತೆ ತಿದ್ದುಪಡಿ & ಅರ್ಜಿ ದಿನಾಂಕ ವಿಸ್ತರಣೆ ಅಧಿಸೂಚನೆ (New)
ಡೌನ್‌ಲೋಡ್ ಮಾಡಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQS) 

ಪ್ರಶ್ನೆ 1:KEA Land Surveyor Hall Ticket 2026 ಬಿಡುಗಡೆಯಾಗಿದೆಯೇ?
ಉತ್ತರ:ಹೌದು. KEA Land Surveyor 2026 ಪರೀಕ್ಷೆಯ Hall Ticket download link ಲಭ್ಯವಾಗಿದೆ. ಅಭ್ಯರ್ಥಿಗಳು ಅಧಿಕೃತ KEA ಪೋರ್ಟಲ್ ಮೂಲಕ Hall Ticket ಡೌನ್‌ಲೋಡ್ ಮಾಡಬಹುದು.

ಪ್ರಶ್ನೆ 2:KEA Land Surveyor ಪರೀಕ್ಷೆ ಯಾವಾಗ ನಡೆಯಲಿದೆ?
ಉತ್ತರ:RPC / ಉಳಿಕೆ ಮೂಲ ವೃಂದದ Land Surveyor ಪರೀಕ್ಷೆ 02 ಅಕ್ಟೋಬರ್ 2026ರಂದು ನಡೆಯಲಿದೆ. Paper 1 ಬೆಳಗ್ಗೆ 10:30 ರಿಂದ 12:30ರವರೆಗೆ ಮತ್ತು Paper 2 ಮಧ್ಯಾಹ್ನ 2:30 ರಿಂದ 4:30ರವರೆಗೆ ನಡೆಯಲಿದೆ.

ಪ್ರಶ್ನೆ 3:Land Surveyor Hall Ticket ಡೌನ್‌ಲೋಡ್ ಮಾಡಲು ಏನು ಬೇಕು?
ಉತ್ತರ:Hall Ticket ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ತಮ್ಮ Application Number ಮತ್ತು Date of Birth ಸೇರಿದಂತೆ KEA ಪೋರ್ಟಲ್‌ನಲ್ಲಿ ಕೇಳಿರುವ login ವಿವರಗಳನ್ನು ಬಳಸಬೇಕು.

ಪ್ರಶ್ನೆ 4: ಈ ಹುದ್ದೆಗಳಿಗೆ ವೇತನ ಎಷ್ಟು ಸಿಗುತ್ತದೆ?
ಉತ್ತರ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 37,500 ರಿಂದ ರೂ. 76,100 ರ ವೇತನ ಶ್ರೇಣಿ ಇರುತ್ತದೆ.

ಪ್ರಶ್ನೆ 5: ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರುತ್ತದೆಯೆ?
ಉತ್ತರ: ಹೌದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಪ್ರಶ್ನೆ 6: ತರಬೇತಿ ಅವಧಿ ಎಷ್ಟು ತಿಂಗಳು ಇರುತ್ತದೆ?
ಉತ್ತರ: ಆಯ್ಕೆಯಾದ ನಂತರ ಅಭ್ಯರ್ಥಿಗಳಿಗೆ ಆರು ತಿಂಗಳ ಕಾಲ ಕಡ್ಡಾಯ ವೃತ್ತಿ ಬುನಾದಿ ತರಬೇತಿ ನೀಡಲಾಗುತ್ತದೆ.

ಪ್ರಶ್ನೆ 7: KEA Land Surveyor Recruitment 2026 ಗೆ ಅರ್ಜಿ ಸಲ್ಲಿಸಲು ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎಷ್ಟು?
ಉತ್ತರ: ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿಯು ಸಾಮಾನ್ಯ ವರ್ಗಕ್ಕೆ 40 ವರ್ಷಗಳು, ಹಿಂದುಳಿದ ವರ್ಗಗಳಿಗೆ 43 ವರ್ಷಗಳು ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 45 ವರ್ಷಗಳು.

ಪ್ರಶ್ನೆ 8: ಕಂಪ್ಯೂಟರ್ ಮತ್ತು ಆಟೋಕ್ಯಾಡ್ ಜ್ಞಾನ ಇರಬೇಕಾ?
ಉತ್ತರ: ಹೌದು, ನಿರ್ದಿಷ್ಟ ಪತ್ರಿಕೆಯಲ್ಲಿ (ಪತ್ರಿಕೆ-2) ಕಂಪ್ಯೂಟರ್ ಅಪ್ಲಿಕೇಶನ್‌ಗಳು ಮತ್ತು ಆಟೋಕ್ಯಾಡ್ ವಿಷಯಗಳ ಮೇಲೆ ಶೇಕಡಾ 20 ರಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಕೊನೆಯ ಮಾತು 

KEA Land Surveyor Recruitment 2026 ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇದೀಗ ಪರೀಕ್ಷೆಯ ಸಿದ್ಧತೆ ಪ್ರಮುಖವಾಗಿದೆ. ಅಭ್ಯರ್ಥಿಗಳು ತಮ್ಮ Hall Ticket ಅನ್ನು Download ಮಾಡಿಕೊಂಡು ಪರೀಕ್ಷಾ ಕೇಂದ್ರ, ದಿನಾಂಕ ಮತ್ತು ಸಮಯವನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳಬೇಕು.

Land Surveyor ನೇಮಕಾತಿಗೆ ಸಂಬಂಧಿಸಿದ ಮುಂದಿನ ಅಧಿಕೃತ ಮಾಹಿತಿ ಮತ್ತು ಪರೀಕ್ಷಾ ಅಪ್‌ಡೇಟ್‌ಗಳಿಗಾಗಿ KEA ಅಧಿಕೃತ ಪೋರ್ಟಲ್ ಅನ್ನು ಪರಿಶೀಲಿಸುತ್ತಿರಿ.

 

ಲೇಖಕರ ಬಗ್ಗೆ

ಸೌಮ್ಯ KH

ಸೌಮ್ಯ KH ಅವರು ಉದ್ಯೋಗ ಮಾಹಿತಿ, ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕ್ಷೇತ್ರದಲ್ಲಿ ಅನುಭವಿ ಲೇಖಕಿಯಾಗಿದ್ದು, ಸಂಕೀರ್ಣ ವಿಷಯಗಳನ್ನು ಸರಳ ಮತ್ತು ಸ್ಪಷ್ಟ ಕನ್ನಡದಲ್ಲಿ ವಿವರಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಇವರು ಸರ್ಕಾರಿ ಮತ್ತು ಖಾಸಗಿ ವಲಯದ ನೇಮಕಾತಿ ಅಪ್‌ಡೇಟ್‌ಗಳನ್ನು ನಿಖರವಾಗಿ ನೀಡುತ್ತಾ, ಅಭ್ಯರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ ಕುರಿತಾದ ಸಲಹೆಗಳನ್ನು ಒದಗಿಸುತ್ತಾರೆ. ವಿಶ್ವಾಸಾರ್ಹ ಮಾಹಿತಿ ಮತ್ತು ಪ್ರಾಯೋಗಿಕ ಜ್ಞಾನವನ್ನು ಸರಳ ಭಾಷೆಯಲ್ಲಿ ತಲುಪಿಸುವುದು ಇವರ ಬರವಣಿಗೆಯ ವಿಶೇಷತೆಯಾಗಿದೆ.