KEA VAO Recruitment 2026: ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಅರ್ಜಿಯ ಕೊನೆಯ ದಿನಾಂಕ ವಿಸ್ತರಣೆ

Table of Contents

🔴 ಪ್ರಮುಖ ಅಪ್‌ಡೇಟ್

🔔 KEA VAO Hall Ticket 2026 Update

KEA VAO Hall Ticket 2026 ಬಿಡುಗಡೆ ಮಾಡಲಾಗಿದೆ. VAO ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು KEA ಅಧಿಕೃತ ಪೋರ್ಟಲ್ ಮೂಲಕ ತಮ್ಮ ಹಾಲ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

RPC / ಸಾಮಾನ್ಯ ವೃಂದ ಪರೀಕ್ಷೆ: 04 ಅಕ್ಟೋಬರ್ 2026

ಕಲ್ಯಾಣ ಕರ್ನಾಟಕ ವೃಂದ ಪರೀಕ್ಷೆ: 25 ಅಕ್ಟೋಬರ್ 2026

ಹಾಲ್ ಟಿಕೆಟ್‌ನಲ್ಲಿ ನೀಡಿರುವ ಪರೀಕ್ಷಾ ಕೇಂದ್ರ, ದಿನಾಂಕ, ಸಮಯ ಮತ್ತು ಇತರೆ ಸೂಚನೆಗಳನ್ನು ಅಭ್ಯರ್ಥಿಗಳು ತಪ್ಪದೇ ಪರಿಶೀಲಿಸಿಕೊಳ್ಳಬೇಕು.


👉 VAO Hall Ticket Download

ಕೊನೆಯ ಅಪ್‌ಡೇಟ್:  1 OCTOBER 2026

ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯ

KEA VAO Recruitment 2026ರ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿ 20 ಆಗಸ್ಟ್ 2026ರವರೆಗೆ ಅವಕಾಶ ನೀಡಲಾಗಿತ್ತು. ಅರ್ಜಿ ಶುಲ್ಕ ಪಾವತಿಸಲು 21 ಆಗಸ್ಟ್ 2026 ಕೊನೆಯ ದಿನವಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. 

ಪ್ರಸ್ತುತ ಹೊಸದಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮುಂದಿನ ನೇಮಕಾತಿ ಹಂತಗಳು ಹಾಗೂ ಅಧಿಕೃತ ಪ್ರಕಟಣೆಗಳಿಗಾಗಿ KEA ಮಾಹಿತಿಯನ್ನು ಗಮನಿಸಬೇಕು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಗ್ರಾಮ ಆಡಳಿತಾಧಿಕಾರಿ (VAO) (KEA VAO Recruitment 2026 )ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಅಪ್ಡೇಟ್ ಹೊರಡಿಸಿದೆ. ಈ ಹಿಂದೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದ ದಿನಾಂಕವನ್ನು ಕೆಇಎ ಮತ್ತೆ ವಿಸ್ತರಿಸಿದ್ದು, ಇನ್ನುವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದ್ದರೆ, ಪರಿಷ್ಕೃತ ಕೊನೆಯ ದಿನಾಂಕ, ಶುಲ್ಕ ಪಾವತಿಯ ವಿವರ ಹಾಗೂ ಹೊಸ ದಿನಾಂಕ ವಿಸ್ತರಣೆಯ ಸಂಪೂರ್ಣ ಹಿನ್ನೆಲೆಯನ್ನು ಕೆಳಗೆ ನೀಡಲಾಗಿದೆ.

KEA VAO Recruitment 2026: ಪ್ರಮುಖ ಮಾಹಿತಿಗಳ ಸಂಕ್ಷಿಪ್ತ ವಿವರ

ಪ್ರಮುಖ ವಿವರಗಳುಮಾಹಿತಿ
ನೇಮಕಾತಿ ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಉದ್ಯೋಗ ಇಲಾಖೆಕಂದಾಯ ಇಲಾಖೆ (Revenue Department)
ಹುದ್ದೆಯ ಹೆಸರುಗ್ರಾಮ ಆಡಳಿತ ಅಧಿಕಾರಿ (Village Administrative Officer)
ಒಟ್ಟು ಖಾಲಿ ಹುದ್ದೆಗಳು572 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನಆನ್‌ಲೈನ್ ಮೂಲಕ (Online Application)
ಉದ್ಯೋಗ ಸ್ಥಳಕರ್ನಾಟಕದಾದ್ಯಂತ (ವಿವಿಧ ಜಿಲ್ಲೆಗಳಲ್ಲಿ)
ವೇತನ ಶ್ರೇಣಿ₹34,100 ರಿಂದ ₹67,600 (ಪ್ರತಿ ತಿಂಗಳು)
ಅಧಿಕೃತ ವೆಬ್‌ಸೈಟ್cetonline.karnataka.gov.in

 

KEA VAO Exam Date 2026

KEA VAO Recruitment 2026 ಪರೀಕ್ಷೆಯನ್ನು RPC ಮತ್ತು ಕಲ್ಯಾಣ ಕರ್ನಾಟಕ (KK) ವೃಂದಗಳಿಗೆ ಪ್ರತ್ಯೇಕವಾಗಿ ನಡೆಸಲಾಗುತ್ತದೆ.

ವೃಂದಪರೀಕ್ಷಾ ದಿನಾಂಕಸಮಯ
RPC / ಸಾಮಾನ್ಯ ವೃಂದ04-10-202610:30 AM – 12:00 PM
ಕಲ್ಯಾಣ ಕರ್ನಾಟಕ (KK)25-10-20262:30 PM – 4:00 PM

 

ನೇಮಕಾತಿಯ ಪ್ರಮುಖ ದಿನಾಂಕಗಳು (Date Extension Update)

ವಿವರದಿನಾಂಕ / ಸ್ಥಿತಿ
ಅಧಿಸೂಚನೆ10-07-2026
ಅರ್ಜಿ ಆರಂಭ11-07-2026
ಮೂಲ ಕೊನೆಯ ದಿನಾಂಕ30-07-2026
ವಿಸ್ತರಿಸಿದ ಕೊನೆಯ ದಿನಾಂಕ20-08-2026 — ಮುಕ್ತಾಯ
ಶುಲ್ಕ ಪಾವತಿ ಕೊನೆಯ ದಿನಾಂಕ21-08-2026 — ಮುಕ್ತಾಯ
ಪ್ರಸ್ತುತ ಸ್ಥಿತಿ🔴 ಅರ್ಜಿ ಸಲ್ಲಿಕೆ ಮುಕ್ತಾಯ

 

ಗಮನಿಸಿ: ಈ ಹಿಂದೆ 30.07.2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು, ನಂತರ ಅದನ್ನು 07.08.2026 ರವರೆಗೆ ವಿಸ್ತರಿಸಲಾಗಿತ್ತು. ಆದರೆ ಈಗಿನ ಹೊಸ ಆಫೀಶಿಯಲ್ ನೋಟಿಫಿಕೇಶನ್ ಪ್ರಕಾರ ಆಗಸ್ಟ್ 20, 2026 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಸೂಚನೆ: ಉಳಿದಂತೆ ದಿನಾಂಕ 10.07.2026 ರ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

KEA VAO ಅರ್ಜಿ ದಿನಾಂಕ ಮತ್ತೆ ವಿಸ್ತರಣೆಗೆ ಪ್ರಮುಖ ಕಾರಣಗಳು ಹಾಗೂ ಹಿನ್ನೆಲೆ

  • ಅಭ್ಯರ್ಥಿಗಳಿಗೆ ಮತ್ತೊಂದು ಸುವರ್ಣ ಅವಕಾಶ: ಈ ಹಿಂದೆ ನಿಗದಿಪಡಿಸಿದ್ದ ದಿನಾಂಕದೊಳಗೆ (07.08.2026) ಅರ್ಜಿ ಸಲ್ಲಿಸಲು ಸಾಧ್ಯವಾಗದ ಅರ್ಹ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆಇಎ ಈ ನಿರ್ಧಾರ ತೆಗೆದುಕೊಂಡಿದೆ.
  • ತಾಂತ್ರಿಕ ತೊಂದರೆ ಮತ್ತು ಸರ್ವರ್ ದಟ್ಟಣೆ: ಅರ್ಜಿ ಸಲ್ಲಿಕೆಯ ಕೊನೆಯ ದಿನಗಳಲ್ಲಿ ವೆಬ್‌ಸೈಟ್‌ನಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳು (Server Network Issues) ಮತ್ತು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಏಕಕಾಲಕ್ಕೆ ಲಾಗಿನ್ ಆಗುವುದರಿಂದಾಗುವ ವಿಳಂಬವನ್ನು ತಪ್ಪಿಸಲು ಕಾಲಾವಕಾಶ ನೀಡಲಾಗಿದೆ.
  • ಶುಲ್ಕ ಪಾವತಿಗೆ ಹೆಚ್ಚಿನ ಸಮಯ: ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಶುಲ್ಕ ಪಾವತಿಸಲು ಅನುಕೂಲವಾಗುವಂತೆ ಹೆಚ್ಚಿನ ಸಮಯವನ್ನು ಒದಗಿಸಲಾಗಿದೆ.

 

KEA VAO Recruitment 2026 ಪ್ರಮುಖ ವಿವರಗಳು

ಈ ನೇಮಕಾತಿಯ ಮೂಲಕ ಕಂದಾಯ ಇಲಾಖೆಯು ರಾಜ್ಯಾದ್ಯಂತ ಒಟ್ಟು 572 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅಭ್ಯರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಮುಖ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ವಿವರಗಳುಮಾಹಿತಿ
ನೇಮಕಾತಿ ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಇಲಾಖೆಯ ಹೆಸರುಕಂದಾಯ ಇಲಾಖೆ (Revenue Department)
ಹುದ್ದೆಯ ಹೆಸರುಗ್ರಾಮ ಆಡಳಿತ ಅಧಿಕಾರಿ (VAO)
ಒಟ್ಟು ಹುದ್ದೆಗಳು572 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನಆನ್‌ಲೈನ್ ಮೂಲಕ
ವೇತನ ಶ್ರೇಣಿರೂ. 34,100 ರಿಂದ ರೂ. 67,600

ಹುದ್ದೆಗಳ ಜಿಲ್ಲಾವಾರು ಸಂಪೂರ್ಣ ವಿವರ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಮ್ಮ ಜಿಲ್ಲೆಯಲ್ಲಿ ಅಥವಾ ತಾವು ಆಯ್ದುಕೊಳ್ಳುವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ಎಂಬುದನ್ನು ಗಮನಿಸಬೇಕು. ಇಲ್ಲಿ ಉಳಿಕೆ ಮೂಲ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ (KK) ವೃಂದ ಎರಡರ ವಿವರವನ್ನೂ ಪ್ರತ್ಯೇಕವಾಗಿ ನೀಡಲಾಗಿದೆ.

ಕ್ರಮ ಸಂಖ್ಯೆಜಿಲ್ಲೆಯ ಹೆಸರುವೃಂದದ ಪ್ರಕಾರಖಾಲಿ ಹುದ್ದೆಗಳು
1ತುಮಕೂರುಉಳಿಕೆ ಮೂಲ ವೃಂದ (RPC)50
2ಮಂಡ್ಯಉಳಿಕೆ ಮೂಲ ವೃಂದ (RPC)50
3ಬೆಳಗಾವಿಉಳಿಕೆ ಮೂಲ ವೃಂದ (RPC)48
4ಮೈಸೂರುಉಳಿಕೆ ಮೂಲ ವೃಂದ (RPC)45
5ಹಾಸನಉಳಿಕೆ ಮೂಲ ವೃಂದ (RPC)35
6ಚಾಮರಾಜನಗರಉಳಿಕೆ ಮೂಲ ವೃಂದ (RPC)31
7ಬೆಂಗಳೂರು ದಕ್ಷಿಣಉಳಿಕೆ ಮೂಲ ವೃಂದ (RPC)30
8ಬೆಂಗಳೂರು ಗ್ರಾಮಾಂತರಉಳಿಕೆ ಮೂಲ ವೃಂದ (RPC)29
9ಕೋಲಾರಉಳಿಕೆ ಮೂಲ ವೃಂದ (RPC)22
10ಚಿಕ್ಕಬಳ್ಳಾಪುರಉಳಿಕೆ ಮೂಲ ವೃಂದ (RPC)21
11ಬೆಂಗಳೂರು ನಗರಉಳಿಕೆ ಮೂಲ ವೃಂದ (RPC)20
12ದಕ್ಷಿಣ ಕನ್ನಡಉಳಿಕೆ ಮೂಲ ವೃಂದ (RPC)20
13ಶಿವಮೊಗ್ಗಉಳಿಕೆ ಮೂಲ ವೃಂದ (RPC)18
14ಬಾಗಲಕೋಟೆಉಳಿಕೆ ಮೂಲ ವೃಂದ (RPC)16
15ಚಿತ್ರದುರ್ಗಉಳಿಕೆ ಮೂಲ ವೃಂದ (RPC)15
16ಹಾವೇರಿಉಳಿಕೆ ಮೂಲ ವೃಂದ (RPC)15
17ಗದಗಉಳಿಕೆ ಮೂಲ ವೃಂದ (RPC)14
18ಉಡುಪಿಉಳಿಕೆ ಮೂಲ ವೃಂದ (RPC)10
19ಚಿಕ್ಕಮಗಳೂರುಉಳಿಕೆ ಮೂಲ ವೃಂದ (RPC)10
20ಬೀದರ್ (RPC)ಉಳಿಕೆ ಮೂಲ ವೃಂದ (RPC)04
21ರಾಯಚೂರು (RPC)ಉಳಿಕೆ ಮೂಲ ವೃಂದ (RPC)02
22ಕಲಬುರಗಿಕಲ್ಯಾಣ ಕರ್ನಾಟಕ ವೃಂದ (KK)40
23ಬೀದರ್ (KK)ಕಲ್ಯಾಣ ಕರ್ನಾಟಕ ವೃಂದ (KK)17
24ರಾಯಚೂರು (KK)ಕಲ್ಯಾಣ ಕರ್ನಾಟಕ ವೃಂದ (KK)10

ವಿಶೇಷ ಸೂಚನೆ: ಅಭ್ಯರ್ಥಿಗಳು ಕೇವಲ ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅರ್ಹತೆ ಮತ್ತು ಶೈಕ್ಷಣಿಕ ವಿದ್ಯಾರ್ಹತೆಗಳು

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ದ್ವಿತೀಯ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ತತ್ಸಮಾನ ವಿದ್ಯಾರ್ಹತೆಗಳ ವಿವರ ಕೆಳಗಿನಂತಿದೆ:

  • ಸಿ.ಬಿ.ಎಸ್.ಇ (CBSE) ಅಥವಾ ಐ.ಸಿ.ಎಸ್.ಇ (ICSE) ಮಂಡಳಿಯ 12ನೇ ತರಗತಿ ಪರೀಕ್ಷೆ.
  • ರಾಷ್ಟ್ರೀಯ ಮುಕ್ತ ಶಾಲೆ ಸಂಸ್ಥೆಯಿಂದ (NIOS) ಪ್ರೌಢ ಶಿಕ್ಷಣ ಕೋರ್ಸ್.
  • ಮೂರು ವರ್ಷಗಳ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐಟಿಐ ಜೊತೆಗೆ ಎನ್.ಐ.ಒ.ಎಸ್ ವತಿಯಿಂದ ನಡೆಸುವ ಭಾಷಾ ಕೋರ್ಸ್ ಉತ್ತೀರ್ಣರಾಗಿರಬೇಕು.

ವಯೋಮಿತಿ ಸಡಿಲಿಕೆಯ ಹೊಸ ನಿಯಮ

ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸರ್ಕಾರವು ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಿದೆ. ಕನಿಷ್ಠ 18 ವರ್ಷ ತುಂಬಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಬಹುದು. ಪರಿಷ್ಕೃತ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:

  • ಸಾಮಾನ್ಯ ವರ್ಗ (General Merit): ಗರಿಷ್ಠ 40 ವರ್ಷಗಳು.
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: ಗರಿಷ್ಠ 43 ವರ್ಷಗಳು.
  • ಪ.ಜಾತಿ, ಪ.ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳು: ಗರಿಷ್ಠ 45 ವರ್ಷಗಳು.

KEA VAO Recruitment 2026 ಮೀಸಲಾತಿ ವಿವರಗಳು

ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರದ ನಿಯಮಗಳ ಅನ್ವಯ ವಿವಿಧ ಪ್ರವರ್ಗ ಹಾಗೂ ಸಮುದಾಯಗಳ ಅಭ್ಯರ್ಥಿಗಳಿಗೆ ಕೆಳಗಿನಂತೆ ಮೀಸಲಾತಿಯನ್ನು ಕಲ್ಪಿಸಲಾಗಿದೆ:

1. ಪ್ರವರ್ಗವಾರು ಮೀಸಲಾತಿ (Category-wise Reservation)

ಅಭ್ಯರ್ಥಿಗಳ ಜಾತಿಗೆ ಅನುಗುಣವಾಗಿ ಪ್ರಮುಖವಾಗಿ ಈ ಕೆಳಗಿನ ಪ್ರವರ್ಗಗಳಿಗೆ ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ:

  • ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)
  • ಪ್ರವರ್ಗ-1 (Category-1)
  • ಪ್ರವರ್ಗ 2ಎ (2A), 2ಬಿ (2B)
  • ಪ್ರವರ್ಗ 3ಎ (3A), 3ಬಿ (3B)
  • ಸಾಮಾನ್ಯ ಅರ್ಹತೆ (General Merit – GM)

2. ಸಮಾನಾಂತರ ಮೀಸಲಾತಿ (Horizontal Reservation)

ಪ್ರತಿಯೊಂದು ಪ್ರವರ್ಗದ ಒಳಗೂ ಅರ್ಹ ಅಭ್ಯರ್ಥಿಗಳಿಗೆ ಕೆಳಗಿನ ವಿಶೇಷ ಒಳ-ಮೀಸಲಾತಿಗಳು ಅನ್ವಯವಾಗುತ್ತವೆ:

  • ಮಹಿಳಾ ಮೀಸಲಾತಿ: ಒಟ್ಟು ಹುದ್ದೆಗಳಲ್ಲಿ ಶೇಕಡಾ 33 ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.
  • ಕನ್ನಡ ಮಾಧ್ಯಮ ಮೀಸಲಾತಿ: 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಶೇಕಡಾ 5 ರಷ್ಟು ಮೀಸಲಾತಿ ಇರುತ್ತದೆ.
  • ಗ್ರಾಮೀಣ ಅಭ್ಯರ್ಥಿ ಮೀಸಲಾತಿ: ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಓದಿದ ಅಭ್ಯರ್ಥಿಗಳಿಗೆ ಶೇಕಡಾ 25 ರಷ್ಟು ಹುದ್ದೆಗಳು ಲಭ್ಯವಿರುತ್ತವೆ.
  • ಮಾಜಿ ಸೈನಿಕ ಹಾಗೂ ವಿಕಲಚೇತನ ಮೀಸಲಾತಿ: ಸರ್ಕಾರದ ನಿಯಮಾವಳಿಗಳ ಪ್ರಕಾರ ಅರ್ಹ ಮಾಜಿ ಸೈನಿಕರಿಗೆ ಮತ್ತು ವಿಕಲಚೇತನ (PH) ಅಭ್ಯರ್ಥಿಗಳಿಗೆ ವಿಶೇಷ ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ.
  • ಯೋಜನಾ ನಿರಾಶ್ರಿತ ಮೀಸಲಾತಿ: ವಿವಿಧ ಅಭಿವೃದ್ಧಿ ಯೋಜನೆಗಳಿಂದ ಜಮೀನು ಕಳೆದುಕೊಂಡ ಕುಟುಂಬದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮೀಸಲಾತಿ ಸಿಗಲಿದೆ.

ಪ್ರಮುಖ ಸೂಚನೆ:

ಮೀಸಲಾತಿ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

 

ವೇತನ ಶ್ರೇಣಿ ಮತ್ತು ಕೆಲಸದ ಅವಧಿಯ ವಿವರಗಳು

ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ಅಧಿಕೃತ ವೇತನ ಮತ್ತು ಉದ್ಯೋಗದ ಸ್ವರೂಪದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ:

  • ಆಕರ್ಷಕ ವೇತನ ಶ್ರೇಣಿ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 34,100 ರಿಂದ ರೂ. 67,600 ರವರೆಗೆ ಅಧಿಕೃತ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಇತರೆ ಭತ್ಯೆಗಳೂ ಕೂಡ ಲಭ್ಯವಿರಲಿವೆ.
  • ಸಂಪೂರ್ಣ ಖಾಯಂ ಸರ್ಕಾರಿ ಉದ್ಯೋಗ: ಇದು ಯಾವುದೇ ಒಪ್ಪಂದ (Contract) ಆಧಾರಿತ ಕೆಲಸವಲ್ಲ. ಇದು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಡಿ ಬರುವ 100% ಖಾಯಂ (Permanent) ಸರ್ಕಾರಿ ಹುದ್ದೆಯಾಗಿದೆ.
  • ಪೂರ್ಣ ಅವಧಿ ಕೆಲಸ (Full-Time Job): ಇವು ಪೂರ್ಣ ಅವಧಿಯ (Full-Time) ಕಾಯಂ ಹುದ್ದೆಗಳಾಗಿದ್ದು, ಸರ್ಕಾರದ ನಿಯಮಿತ ಕಚೇರಿ ಅವಧಿಯ ಪ್ರಕಾರ ಅಭ್ಯರ್ಥಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕಗಳು

ಪರೀಕ್ಷೆಗಳು ನಡೆಯುವ ನಿಖರವಾದ ದಿನಾಂಕಗಳನ್ನು ಕೋಷ್ಟಕದಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಲಿಂಕ್ ಬಳಸಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

ವಿವರಗಳುದಿನಾಂಕಗಳು
ಉಳಿಕೆ ಮೂಲ ವೃಂದ (RPC) ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ04 ಅಕ್ಟೋಬರ್ 2026
ಕಲ್ಯಾಣ ಕರ್ನಾಟಕ (KK) ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ25 ಅಕ್ಟೋಬರ್ 2026

ಅರ್ಜಿ ಶುಲ್ಕದ ವಿವರ

  • ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳು (2A/2B/3A/3B): ರೂ. 750/-
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕರು: ರೂ. 500/-
  • ವಿಶೇಷ ಚೇತನ ಅಭ್ಯರ್ಥಿಗಳಿಗೆ: ರೂ. 250/- (ಕೇವಲ ಪ್ರಕ್ರಿಯೆ ಶುಲ್ಕ ಮಾತ್ರ)

KEA VAO Recruitment 2026 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಿಯಾದ ವಿಧಾನ

⚠️ ಸೂಚನೆ: ಈ ನೇಮಕಾತಿಯ ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದೆ. ಕೆಳಗೆ ನೀಡಿರುವ ಅರ್ಜಿ ಸಲ್ಲಿಕೆ ವಿಧಾನವನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಯಾವುದೇ ತಪ್ಪುಗಳಿಲ್ಲದೆ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಸರಿಯಾಗಿ ಪಾಲಿಸಿ:

  • ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
    ಪ್ರಥಮವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಆದ cetonline.karnataka.gov.in/kea/ ಗೆ ಭೇಟಿ ನೀಡಿ.
  • ಹಂತ 2: ನೋಂದಣಿ (New Registration) ಮಾಡಿಕೊಳ್ಳಿ
    ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ಕಾಣಿಸುವ “VAO Recruitment 2026 Online Application Form” ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ‘New Registration’ ಆಯ್ದುಕೊಂಡು ನಿಮ್ಮ ಹೆಸರು, mobile ಸಂಖ್ಯೆ ಮತ್ತು ಇಮೇಲ್ ಐಡಿ ನೀಡಿ ನೋಂದಣಿ ಮಾಡಿಕೊಳ್ಳಿ.
  • ಹಂತ 3: ಲಾಗಿನ್ ಆಗಿ ವಿವರಗಳನ್ನು ಭರ್ತಿ ಮಾಡಿ
    ನೋಂದಣಿ ಮುಗಿದ ನಂತರ ನಿಮ್ಮ ಮೊಬೈಲ್‌ಗೆ ಬರುವ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ. ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಜಿಲ್ಲೆಯ ಆಯ್ಕೆಯನ್ನು ಸರಿಯಾಗಿ ನಮೂದಿಸಿ.
  • ಹಂತ 4: ದಾಖಲೆಗಳನ್ನು ಅಪ್‌ಲೋಡ್ ಮಾಡಿ
    ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಹಾಗೂ ಅಗತ್ಯವಿರುವ ಜಾತಿ ಅಥವಾ ಸೇವಾ ಮೀಸಲಾತಿ ಪ್ರಮಾಣಪತ್ರಗಳನ್ನು ಜೆಪಿಜಿ ಅಥವಾ ಪಿಡಿಎಫ್ ಫಾರ್ಮ್ಯಾಟ್‌ನಲ್ಲಿ ಸ್ಪಷ್ಟವಾಗಿ ಅಪ್‌ಲೋಡ್ ಮಾಡಿ.
  • ಹಂತ 5: ಅರ್ಜಿ ಶುಲ್ಕ ಪಾವತಿಸಿ
    ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ, ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಯುಪಿಐ ಅಥವಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿ ಮಾಡಿ.
  • ಹಂತ 6: ಪ್ರಿಂಟ್ ಔಟ್ ತೆಗೆದುಕೊಳ್ಳಿ
    ಶುಲ್ಕ ಪಾವತಿ ಯಶಸ್ವಿಯಾದ ನಂತರ, ನಿಮ್ಮ ಭರ್ತಿ ಮಾಡಿದ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಒಂದು ಪ್ರಿಂಟ್ ಔಟ್ ಪ್ರತಿಯನ್ನು ಮುಂದಿನ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಎತ್ತಿಟ್ಟುಕೊಳ್ಳಿ.

ಗಮನಿಸಬೇಕಾದ ಪ್ರಮುಖ ಟಿಪ್ಸ್:

  1. ಅಭ್ಯರ್ಥಿಗಳು ಕೇವಲ ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ, ಜಿಲ್ಲೆಯನ್ನು ಆಯ್ಕೆ ಮಾಡುವಾಗ ಹುದ್ದೆಗಳ ವಿವರ ನೋಡಿ ಜಾಗರೂಕತೆಯಿಂದ ನಿರ್ಧರಿಸಿ.
  2. ಕೊನೆಯ ದಿನದವರೆಗೂ ಕಾಯದೆ ಸರ್ವರ್ ಬ್ಯುಸಿ ಬರುವ ಮುನ್ನವೇ ಅರ್ಜಿ ಸಲ್ಲಿಸುವುದು ಉತ್ತಮ.

ಇತರೆ ಉಪಯುಕ್ತ ಉದ್ಯೋಗ ಮಾಹಿತಿಗಳು 

👉 ತೋಟಗಾರಿಕೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ? ಇದನ್ನೊಮ್ಮೆ ನೋಡಿ

👉 ಅರಣ್ಯ ಇಲಾಖೆಯಲ್ಲಿ ಕೆಲಸ ಬೇಕಿದ್ದರೆ ಈ ಅವಕಾಶ ತಪ್ಪಿಸಿಕೊಳ್ಳಬೇಡಿ

👉ಭೂಮಾಪಕರ ಹುದ್ದೆಯ ಅರ್ಜಿ ಹಾಗೂ ಅರ್ಹತೆ ಬಗ್ಗೆ ಇಲ್ಲಿ ತಿಳಿಯಿರಿ

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ ಮತ್ತು ನೆಗೆಟಿವ್ ಮಾರ್ಕಿಂಗ್

ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಲಿಖಿತ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ನಡೆಯುತ್ತದೆ. ಪರೀಕ್ಷೆಯು ಆಫ್‌ಲೈನ್ ಓ.ಎಂ.ಆರ್ (OMR) ಮಾದರಿಯಲ್ಲಿದ್ದು, ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪತ್ರಿಕೆಯು 100 ಅಂಕಗಳಿಗೆ 2 ಗಂಟೆಗಳ ಅವಧಿಯನ್ನು ಹೊಂದಿರುತ್ತದೆ. ಪತ್ರಿಕೆ-1 ಸಾಮಾನ್ಯ ಜ್ಞಾನ ವಿಷಯಗಳನ್ನು ಹೊಂದಿದ್ದರೆ, ಪತ್ರಿಕೆ-2 ಸಾಮಾನ್ಯ ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನವನ್ನು ಒಳಗೊಂಡಿರುತ್ತದೆ.

ನೆಗೆಟಿವ್ ಮಾರ್ಕಿಂಗ್ ವಿವರ: ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಅಭ್ಯರ್ಥಿಗಳು ಯಾವುದೇ ಪ್ರಶ್ನೆಗೆ ಉತ್ತರಿಸಲು ಬಯಸದಿದ್ದರೆ, ಓಎಂಆರ್ ಶೀಟ್‌ನಲ್ಲಿರುವ 5ನೇ ವೃತ್ತವನ್ನು ಕಡ್ಡಾಯವಾಗಿ ಶೇಡ್ ಮಾಡಬೇಕು, ಇಲ್ಲದಿದ್ದರೆ ಅದಕ್ಕೂ ನೆಗೆಟಿವ್ ಅಂಕ ಅನ್ವಯವಾಗುತ್ತದೆ.

KEA VAO ಪ್ರಮುಖ ಲಿಂಕ್‌(RPC & KK ಪ್ರತ್ಯೇಕವಾಗಿ)

ಅಭ್ಯರ್ಥಿಗಳ ಅನುಕೂಲಕ್ಕಾಗಿ ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK) ಭಾಗದ ಅಧಿಕೃತ ಪಿಡಿಎಫ್ ಹಾಗೂ ಅರ್ಜಿ ಸಲ್ಲಿಸುವ ಲಿಂಕ್‌ಗಳನ್ನು ಕೆಳಗೆ ಪ್ರತ್ಯೇಕವಾಗಿ ನೀಡಲಾಗಿದೆ:

1. ಉಳಿಕೆ ಮೂಲ ವೃಂದ (RPC – Rest of Karnataka) ಲಿಂಕ್‌ಗಳು

ಸಂಪನ್ಮೂಲಗಳ ವಿವರಲಿಂಕ್‌ಗಳು
RPC ಅಧಿಕೃತ ಅಧಿಸೂಚನೆ (Notification PDF)Download RPC PDF
RPC ಆನ್‌ಲೈನ್ ಅರ್ಜಿ ಸಲ್ಲಿಸುವ ಲಿಂಕ್Apply Online (RPC)

2. ಕಲ್ಯಾಣ ಕರ್ನಾಟಕ ವೃಂದ (KK – Kalyana Karnataka) ಲಿಂಕ್‌ಗಳು

ಸಂಪನ್ಮೂಲಗಳ ವಿವರಲಿಂಕ್‌ಗಳು
KK ಅಧಿಕೃತ ಅಧಿಸೂಚನೆ (Notification PDF)Download KK PDF
KK ಆನ್‌ಲೈನ್ ಅರ್ಜಿ ಸಲ್ಲಿಸುವ ಲಿಂಕ್Apply Online (KK)

ಹೆಚ್ಚಿನ ವಿವರಗಳಿಗಾಗಿ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: KEA Official Website

 

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರಶ್ನೆ 1: ಕೆಇಎ ವಿಎಓ ನೇಮಕಾತಿಯ ಒಟ್ಟು ಹುದ್ದೆಗಳು ಎಷ್ಟು?

ಉತ್ತರ: ಕಂದಾಯ ಇಲಾಖೆಯಲ್ಲಿ ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು ಖಾಲಿ ಇವೆ.

ಪ್ರಶ್ನೆ 2: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನು?

ಉತ್ತರ: ಅಭ್ಯರ್ಥಿಗಳು ದ್ವಿತೀಯ ಪಿಯುಸಿ (PUC) ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಮುಗಿಸಿರಬೇಕು.

ಪ್ರಶ್ನೆ 3:KEA VAO Hall Ticket 2026 ಬಿಡುಗಡೆಯಾಗಿದೆಯೇ?

ಉತ್ತರ:ಹೌದು. RPC / ಸಾಮಾನ್ಯ ವೃಂದದ KEA VAO Hall Ticket 2026 ಅನ್ನು ಸೆಪ್ಟೆಂಬರ್ 28, 2026ರಂದು ಬಿಡುಗಡೆ ಮಾಡಲಾಗಿದೆ.

ಪ್ರಶ್ನೆ 4: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಎಷ್ಟಿದೆ?

ಉತ್ತರ: ಸರ್ಕಾರದ 5 ವರ್ಷಗಳ ಸಡಿಲಿಕೆಯ ನಂತರ ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 40 ವರ್ಷಗಳು.

ಪ್ರಶ್ನೆ 5:KEA VAO RPC ಪರೀಕ್ಷೆ ಯಾವಾಗ ನಡೆಯಲಿದೆ?

ಉತ್ತರ:RPC / ಸಾಮಾನ್ಯ ವೃಂದದ VAO ಪರೀಕ್ಷೆ 04 ಅಕ್ಟೋಬರ್ 2026ರಂದು ನಡೆಯಲಿದೆ.

ಪ್ರಶ್ನೆ 6:KEA VAO Hall Ticket ಎಲ್ಲಿ Download ಮಾಡಬಹುದು?

ಉತ್ತರ:ಅಭ್ಯರ್ಥಿಗಳು KEA ಅಧಿಕೃತ ಅಭ್ಯರ್ಥಿಗಳ ಪೋರ್ಟಲ್ ಮೂಲಕ ತಮ್ಮ Hall Ticket ಅನ್ನು Download ಮಾಡಬಹುದು.

ಪ್ರಶ್ನೆ 7: ಡಿಪ್ಲೊಮಾ ಮುಗಿಸಿದವರು ಈ ಹುದ್ದೆಗೆ ಅರ್ಹರೇ?

ಉತ್ತರ: ಹೌದು, 3 ವರ್ಷಗಳ ಡಿಪ್ಲೊಮಾ ಮುಗಿಸಿ ಎನ್.ಐ.ಒ.ಎಸ್ ಭಾಷಾ ಕೋರ್ಸ್ ಉತ್ತೀರ್ಣರಾದವರು ತತ್ಸಮಾನ ವಿದ್ಯಾರ್ಹತೆಯಡಿ ಅರ್ಜಿ ಸಲ್ಲಿಸಬಹುದು.

ಪ್ರಶ್ನೆ 8: ಆರ್‌ಪಿಸಿ ಮತ್ತು ಕೆಕೆ ವೃಂದದ ಪರೀಕ್ಷೆಗಳು ಒಂದೇ ದಿನ ನಡೆಯುತ್ತವೆಯೇ?

ಉತ್ತರ: ಇಲ್ಲ, ಆರ್‌ಪಿಸಿ ಪರೀಕ್ಷೆ ಅಕ್ಟೋಬರ್ 04 ರಂದು ಹಾಗೂ ಕೆಕೆ ವೃಂದದ ಪರೀಕ್ಷೆ ಅಕ್ಟೋಬರ್ 25, 2026 ರಂದು ನಡೆಯಲಿದೆ.

ಪ್ರಶ್ನೆ 9: ಈ ಹುದ್ದೆಗಳ ಆರಂಭಿಕ ವೇತನ ಎಷ್ಟು ಇರಲಿದೆ?

ಉತ್ತರ: ಈ ಹುದ್ದೆಗಳ ವೇತನ ಶ್ರೇಣಿ ರೂ. 34,100 ರಿಂದ ರೂ. 67,600 ರವರೆಗೆ ಇರಲಿದೆ.

ಪ್ರಶ್ನೆ 10: ಫಲಿತಾಂಶಕ್ಕಾಗಿ ಕಾಯುತ್ತಿರುವ ಕೊನೆಯ ವರ್ಷದ ಪಿಯುಸಿ ವಿದ್ಯಾರ್ಥಿಗಳು ಅರ್ಜಿ ಹಾಕಬಹುದೇ?

ಉತ್ತರ: ಇಲ್ಲ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಯ ಅಂಕಪಟ್ಟಿ ಲಭ್ಯವಿರಬೇಕು.


ಕೊನೆಯ ಮಾತು

KEA VAO Recruitment 2026 ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇದೀಗ ಪರೀಕ್ಷೆಯ ಸಿದ್ಧತೆ ಪ್ರಮುಖ ಹಂತವಾಗಿದೆ. RPC / ಸಾಮಾನ್ಯ ವೃಂದದ ಅಭ್ಯರ್ಥಿಗಳು ತಮ್ಮ Hall Ticket ಅನ್ನು Download ಮಾಡಿಕೊಂಡು ಪರೀಕ್ಷಾ ಕೇಂದ್ರ, ಸಮಯ ಮತ್ತು ಇತರೆ ಸೂಚನೆಗಳನ್ನು ಪರಿಶೀಲಿಸಿಕೊಳ್ಳಬೇಕು.

KEA VAO ಪರೀಕ್ಷೆಗೆ ಸಂಬಂಧಿಸಿದ ಮುಂದಿನ ಅಧಿಕೃತ ಮಾಹಿತಿ, Hall Ticket ಹಾಗೂ ಫಲಿತಾಂಶದ ಅಪ್‌ಡೇಟ್‌ಗಳನ್ನು KEA ಅಧಿಕೃತ ಪೋರ್ಟಲ್‌ನಲ್ಲಿ ಪರಿಶೀಲಿಸುತ್ತಿರಿ.

 

ಲೇಖಕರ ಬಗ್ಗೆ

ಸೌಮ್ಯ KH

ಸ್ಪರ್ಧಾತ್ಮಕ ಪರೀಕ್ಷೆಗಳು, government ಯೋಜನೆಗಳು ಹಾಗೂ ಉದ್ಯೋಗ ಮಾಹಿತಿ ವಿಭಾಗದಲ್ಲಿ ಸುದೀರ್ಘ ಅನುಭವ ಹೊಂದಿರುವ ಕಂಟೆಂಟ್ ರೈಟರ್. ನಿಖರ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನು ಸರಳ ಕನ್ನಡದಲ್ಲಿ ಓದುಗರಿಗೆ ತಲುಪಿಸುವುದು ಇವರ ಮುಖ್ಯ ಉದ್ದೇಶವಾಗಿದೆ.